ಒಂಟಿ
ಒಂಟಿ...
ಎಷ್ಟು ಕನವರಿಸಿದರೂ
ನಾನು ಒಂಟಿ
ಜಂಟಿಯಾಗಿ ಅವನಿದ್ದಾನೆ
ಆದರೂ ನಾನು ಒಂಟಿ!
ನನ್ನ ಲಹರಿ ಆತನಿಗೆ ಅರ್ಥವಾಗಲಾರದು
ಆತ, ಅರ್ಥೈಸಿಕೊಂಡರೂ
ಅವ ಅರ್ಥೈಸಿಕೊಂಡಿದ್ದಾನೆಂಬುದು
ನನಗೆ ಅರ್ಥವಾಗಲಾರದು!
ಹಾಗಾಗಿ
ನಾನು ಒಂಟಿ...
ಕನಸುಗಳು ಜತೆಗಿವೆ
ನನಸಾಗುವ ಭರವಸೆಯೂ
ಜತೆಗಿದೆ
ನೆನಪು ಕನಸುಗಳ ನಡುವೆಯೂ
ಅರ್ಥ-ಅಪಾರ್ಥಗಳ ಮಧ್ಯೆಯೂ
ಕೆಲವೊಮ್ಮೆ ನಾನು ಒಂಟಿ!
ಬದುಕು ಭಾವಗಳ
ನಡುವೆ
ಬರಹ-ವಿರಹಗಳ
ಜತೆಗೆ
ಮುಂದೇನೆಂಬುದು ಅರ್ಥವಾಗುತ್ತಿಲ್ಲ
ಹಾಗಾಗಿ ಮತ್ತೆ ನಾನು...
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ