ಒಂಟಿ

Posted ಜನವರಿ 21, 2009 by chukkikanasu
Categories: ಅಂತರಾಳದ ಕವಿತೆ

ಒಂಟಿ
ಒಂಟಿ...
ಎಷ್ಟು ಕನವರಿಸಿದರೂ
ನಾನು ಒಂಟಿ 
ಜಂಟಿಯಾಗಿ ಅವನಿದ್ದಾನೆ
ಆದರೂ ನಾನು ಒಂಟಿ!

ನನ್ನ ಲಹರಿ ಆತನಿಗೆ ಅರ್ಥವಾಗಲಾರದು
ಆತ, ಅರ್ಥೈಸಿಕೊಂಡರೂ 
ಅವ ಅರ್ಥೈಸಿಕೊಂಡಿದ್ದಾನೆಂಬುದು
ನನಗೆ ಅರ್ಥವಾಗಲಾರದು!
ಹಾಗಾಗಿ 
ನಾನು ಒಂಟಿ...

ಕನಸುಗಳು ಜತೆಗಿವೆ
ನನಸಾಗುವ ಭರವಸೆಯೂ
ಜತೆಗಿದೆ
ನೆನಪು ಕನಸುಗಳ ನಡುವೆಯೂ
ಅರ್ಥ-ಅಪಾರ್ಥಗಳ ಮಧ್ಯೆಯೂ
ಕೆಲವೊಮ್ಮೆ ನಾನು ಒಂಟಿ!

ಬದುಕು ಭಾವಗಳ 
ನಡುವೆ
ಬರಹ-ವಿರಹಗಳ
ಜತೆಗೆ
ಮುಂದೇನೆಂಬುದು ಅರ್ಥವಾಗುತ್ತಿಲ್ಲ
ಹಾಗಾಗಿ ಮತ್ತೆ ನಾನು...
Advertisements

ಆನಿನ್ನು ಒಳಗಣವನು ದೇವಾ…

Posted ಜನವರಿ 1, 2009 by chukkikanasu
Categories: ಲಹರಿ, Uncategorized

ಇದುವರೆಗೆ ದೂರದಿಂದಲೇ ಬ್ಲಾಗ್‌ಲೋಕವನ್ನು ಇಣುಕಿ ನೋಡುತ್ತಿದ್ದ ನಾನೀಗ ಬ್ಲಾಗಿಣಿಯಾಗಿರುವೆ! ಹೊತ್ತು ಕಳೆಯಲು, ನೋವು ಮರೆಯಲಿಕ್ಕೋಸ್ಕರ  ಗೀಚುವ ಹಂಬಲ ನನಗೆ. ಮತ್ತೇನು ಹೇಳಬೇಕೆಂದು ತೋಚುತ್ತಿಲ್ಲ. ತಪ್ಪದೇ ಬರೆಯುತ್ತೇನೆ. ನೀವೆಲ್ಲಾ ಮರೆಯದೆ ಬಂದು ಓದಿ…ಬ್ಲಾಗ್ ಕುರಿತು ಹೇಳಿಕೊಟ್ಟ, ಬ್ಲಾಗಿಸುವುದನ್ನು ಕಲಿಸಿಕೊಟ್ಟ ಅಣ್ಣನಿಗೆ ಧನ್ಯವಾದಗಳು.

ಇಂತಿ

ಪೂರ್ವಿಕಾ